Thursday, 30 October 2014

ಕಂಬಾಲಪಲ್ಲಿ ನರಮೇಧ: ಕೊಂದವರು ಯಾರು? - ಮುಖ್ಯಮಂತ್ರಿಗಳಿಗೆ ಪತ್ರ

ದಿನಾಂಕ 29/10/2014 ರಿಂದ 15/11/2014 ರವರೆಗೆ ಕಂಬಾಲಪಲ್ಲಿ ನರಮೇಧ: ಕೊಂದವರ್ಯಾರು? ಎಂಬ ಪ್ರಶ್ನೆಯೊಂದಿಗೆ ಮುಖ್ಯಮಂತ್ರಿಯವರಿಗೆ ಪತ್ರ ಅಭಿಯಾನವಿರುತ್ತದೆ. ದಯಮಾಡಿ ನೀವೂ, ನಿಮ್ಮ ಕುಟುಂಬ, ಸ್ನೇಹಿತರನ್ನು ಬದ್ದತೆಯಿಂದ 50 ಪೈಸೆ ಪೋಸ್ಟ್ ಕಾರ್ಡಿನಲ್ಲಿ ಪತ್ರ ಬರೆಯಿಸಿ ಪೋಸ್ಟ್ ಮಾಡಿ. ಅನಾಥವಾಗಿ ಬಿದ್ದಿರುವ ನ್ಯಾಯಕ್ಕೆ ಧೈರ್ಯ ತುಂಬಿರಿ. ಪತ್ರದಲ್ಲಿ ವಿವರ ಕೆಳಗಿನಂತಿರಬೇಕು.
ಕಂಬಾಲಪಲ್ಲಿ ನರಮೇಧ: ಕೊಂದವರು ಯಾರು?

ಮುಖ್ಯಮಂತ್ರಿಗಳೇ.. 

14 ವರ್ಷ ಕಳೆದುಹೋದವು. ಅಂದೂ ನಿಮ್ಮ ಸರ್ಕಾರವಿತ್ತು. ಸೋನಿಯಾ ಗಾಂಧಿ ಬಂದಿದ್ದರು. ನ್ಯಾಯ ಸಿಗಲೇ ಇಲ್ಲ.
 ಇಂದೂ ನಿಮ್ಮದೇ ಸರ್ಕಾರ. ಈಗ ನೀವಿದ್ದೀರಿ.. ನ್ಯಾಯ ಕೊಡಿಸುವಿರಾ? ಕೊಡಿಸಲೇಬೇಕು. ಅದಕ್ಕಾಗಿ..

1. ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯಿರುವ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಿ.
2. ಅವರ ಸಹಾಯಕ್ಕೆ ನುರಿತ ವಕೀಲರ ಸಲಹಾ ಸಮಿತಿ ರಚಿಸಿ.
3. ವಿಚಾರಣಾ ಹಂತದಲ್ಲಿ ರಾಜ್ಯ ಮತ್ತು ಸುಪ್ರೀಂ ಕೋರ್ಟ್ ನಡುವಿನ ಕೊಂಡಿಯಾಗಿ ಒಬ್ಬ ವಕೀಲರನ್ನು ನೇಮಿಸಿ.
"ನಾನೂ ದಲಿತನೇ" ಎಂದಿದ್ದ ಮಾತನ್ನು ಕೃತಿಯಾಗಿಸಿ.
"ಆರೋಪಿಗಳು ಖುಲಾಸೆಯಾಗಲಿ ಆದರೆ ನ್ಯಾಯಾಂಗ ಕೊಂದವರನ್ನು ಪತ್ತೆಹಚ್ಚಲಿ”
ಪತ್ರದ ಹಿಂಬಾಗದಲ್ಲಿ ನಿಮ್ಮ ವಿಳಾಸ ಬರೆದು, ನಂತರ ಮುಖ್ಯಮಂತ್ರಿಗೆ ಅವರ ವಿಳಾಸ ಬರೆದು ಕಳುಹಿಸಿರಿ.
ಮಾನ್ಯ ಮುಖ್ಯಮಂತ್ರಿಗಳು
ಮುಖ್ಯಮಂತ್ರಿಗಳ ಕಛೇರಿ
ವಿಧಾನಸೌಧ
ಕರ್ನಾಟಕ ಸರ್ಕಾರ
ಬೆಂಗಳೂರು.

No comments:

Post a Comment